ಪ್ರತ್ಯೇಕ ತುಳು ರಾಜ್ಯ ಬೇಕಂತೆ…!?

ಕೃಪೆ : ದಟ್ಸ್ ಕನ್ನಡ

ಪ್ರತ್ಯೇಕ ತುಳು ರಾಜ್ಯ ಬೇಡಿಕೆಗೆ ಸಕಾಲ : ಹರಿಕೃಷ್ಣ ಪುನರೂರು

ಪಂಚ ದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಮತ್ತು ತುಳುವರಿಗೆ ಅನ್ಯಾಯವಾಗಿದೆ. 1956ರಲ್ಲಿ ಭಾಷಾವಾರು ರಾಜ್ಯಗಳ ರಚನೆಯಾದಾಗ ನಮ್ಮ ನಾಯಕರು ತುಳು ರಾಜ್ಯದ ಬೇಡಿಕೆಯನ್ನು ಇರಿಸದೆ ತುಳುವರಿಗೆ ಅನ್ಯಾಯವೆಸಗಿದ್ದಾರೆ.

ದೇಶದ ಉದ್ಧಾರದ ಹೆಸರಿನಿಂದ ಹೊಸ ಹೊಸ ಕೈಗಾರಿಕೆಗಳು ಬಂದು ತುಳುನಾಡು, ಸಂಸ್ಕೃತಿ ಇದರಿಂದಾಗಿ ನಾಶವಾಗುತ್ತಿದೆ. ತುಳುವರು ಅನಾಥರಾಗಿದ್ದಾರೆ ಈಗ ತೆಲುಗರು ಅವರ ರಾಜ್ಯವನ್ನು ಒಡೆದು ಪ್ರತ್ಯೇಕ ತೆಲುಂಗಾಣ ರಾಜ್ಯದ ಬೇಡಿಕೆಗೆ ಮುಂದಾಗಿದ್ದಾರೆ. ಈ ಸಮಯದಲ್ಲಿ ತೆಲಂಗಾಣ ರಾಜ್ಯವನ್ನು ರಚಿಸಲು ಕೇಂದ್ರ ಸರಕಾರ ಮುಂದೆ ಬಂದರೆ, ತುಳುವರು ನ್ಯಾಯಯುತವಾದ ತುಳು ರಾಜ್ಯ ರಚನೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕಾಗಿದೆ.

ಈ ಸುವರ್ಣ ಅವಕಾಶವನ್ನು ತುಳುವರು ಉಪಯೋಗಪಡಿಸಿ ಹೋರಾಟಕ್ಕೆ ಸಜ್ಜಾಗಬೇಕು. ತುಳು ರಾಜ್ಯದ ರಚನೆಯಾಗಲಿ, ನಮ್ಮ ಸ್ಥಾನಮಾನವನ್ನು ಉಳಿಸಿಕೊಳ್ಳಲು ರಾಜ್ಯದ ರಚನೆಗೆ ಹೋರಾಟ ಮಾಡುವ ಎಂದು ತುಳು ರಾಜ್ಯ ರಚನೆ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ತುಳುವರೇ ಒಂದಾಗಿ.

ಪುದುಮೆಯ ಪ್ರಶ್ನೆ : ಓದುಗರೇ ನಿಮಗೇನನ್ನಿಸುತ್ತದೆ ನಮಗೆ ಪ್ರತ್ಯೇಕ ತುಳುನಾಡಿನ ಅವಶ್ಯಕತೆಯಿದೆಯಾ?

23 Comments Add yours

  1. ಅರವಿಂದ್ ಎಚ್ ಹೇಳುತ್ತಾರೆ:

    ಕರ್ನಾಟಕ ರಾಜ್ಯವೊಂದೆ ಸಾಕು, ಇದರ ಉದ್ದಾರಕ್ಕೆ ಶ್ರಮ ಪಡಲಿ 🙂

  2. ಕೃಷ್ಣಪ್ರಕಾಶ ಬೊಳುಂಬು ಹೇಳುತ್ತಾರೆ:

    ಪ್ರತ್ಯೇಕ ತುಳು ರಾಜ್ಯದ ಆವಶ್ಯಕತೆಯಿಲ್ಲ. ನಮ್ಮ ಹಿರಿಯರು “ಕನ್ನಡಾಂತರ್ಗತವಾದ ತುಳುನಾಡಿನ” ಕನಸು ಕಂಡವರು.
    ಕನ್ನಡಾಂತರ್ಗತಮ್ ತುಳುನಾಡು ನನ್ನದಿದು ಭಾರತಾಂತರ್ಗತಂ ಕನ್ನಡದ ಬದುಕು” – ಕಯ್ಯಾರ ಕಿಞ್ಞಣ್ಣ ರೈ.

    1. ರಾಕೇಶ್ ಶೆಟ್ಟಿ ಹೇಳುತ್ತಾರೆ:

      ಈ ಭವ್ಯ ಸಾಲುಗಳನ್ನ ನೆನಪಿಸಿದ ನಿಮಗೆ ಅನಂತ ಧನ್ಯವಾದಗಳು 🙂

    2. Vivek Poojary ಹೇಳುತ್ತಾರೆ:

      ಕೃಷ್ಣಪ್ರಕಾಶ್ ಅವರೇ, ಕಯ್ಯಾರ ಕಿಂಹ್ಯನ್ನ ರೈ ಅವರು ಇನ್ನೊಂದು ಮಾತು ಹೇಳುತ್ತಾರೆ.. “ಅಂಚಿ ತೆಲುಗೆರ್, ಇಂಚಿ ಕನ್ನಡೆರ್, ಎಂಚ ತಮಿಳೆರ್ ಮೆರೆಪೆರ್, ಕಣ್ಣೆದುರೇ ಕೇರಳಲ ಕೆಲಪುಂಡು, ಎನ್ನ ‘ತುಳುನಾಡ್’ ಬುಲಿಪುಂಡು”…!!

  3. ಕೃಷ್ಣಪ್ರಕಾಶ ಬೊಳುಂಬು ಹೇಳುತ್ತಾರೆ:

    ನಾಳೆ – ನಾಡಿದ್ದು ನಮ್ಮಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಈ ಕಾರಣಕ್ಕೆ ನೆನಪಾಯಿತು. 🙂

  4. ಸಂದೀಪ್ ಕಾಮತ್ ಹೇಳುತ್ತಾರೆ:

    ಬೊಡ್ಚಪ್ಪ ಅವ್ವು ಪುರ ದಾಯೆಗ್!

  5. Shishir DK ಹೇಳುತ್ತಾರೆ:

    ತುಳು, ಕೊಡವ ,ಕೊಂಕಣಿ ,ಬಡಗ ಈ ಎಲ್ಲಾ ಭಾಷೆಗಳಿಗೆ ಮೂಲ ತಾಯಿಯೇ ಕನ್ನಡ .
    ದಯವಿಟ್ಟು ತಾಯಿ ಮಕ್ಕಳನ್ನು ಒಡೆಯುವ ಕೆಲಸ ಮಾಡಬೇಡಿ .
    ನಾನು ಒಬ್ಬ ತುಳು ನಾಡಿನವನೇ .

    ನಮ್ಮ ಕುಡ್ಲ ದಕ್ಲು ಇಂಚ ಪಾತೆರುನ ಬೊಡ್ಚಿ ಮಾರಾಯ್ರೆ

    1. kpbolumbu ಹೇಳುತ್ತಾರೆ:

      i like it, shishir.

    2. Vivek Poojary ಹೇಳುತ್ತಾರೆ:

      ಶಿಶಿರ್, ಕನ್ನಡ ತುಳು ಭಾಷೆಯ ಮೂಲ ಅಲ್ಲ.. ಕನ್ನಡ ಭಾಷೆ, ಸಂಸೃತ್ರ್ಹ, ತುಳು, ತೆಲುಗು, ತಮಿಳ್ ಭಾಷೆಗಳಿಂದ ಆದದ್ದು..!

      1. Suresh, Kuwait ಹೇಳುತ್ತಾರೆ:

        ಪೂಜಾರಿಯವರೇ ಹೆತ್ತಮ್ಮನನ್ನು ಕಡೆಗಣಿಸಲು ಆಕೆಯ ಹಾಲನ್ನೇ ಉಪಯೋಗಿಸಿದ್ದೀರ( ಕನ್ನಡ ಭಾಷೆ ಹಾಗು ಲಿಪಿ). ಸುಮ್ಮನೆ ವೇಳೆ ಹಾಳು ಮಾಡುವ ಬದಲು ಮುಹಮ್ಮದ್ ಅಲಿ ಜಿನ್ನಃ ವರಂತೆ ನೀವು ಏಕೆ ಪ್ರತ್ಯೇಕ ದೇಶವನ್ನೇ ಕೇಳಬಾರದು? ಏಕ್ ದಂ ಜಾಕ್ಪಾಟ್! ಇಲ್ಲವಾದರೆ ತಾಯಿಮಗಳ ಬಾಂಧವ್ಯವನ್ನು ಹಾಳುಮಾಡದೆ ತೆಪ್ಪಗಿರಿ…

      2. tulunadhda balipe ಹೇಳುತ್ತಾರೆ:

        thulu baaseg itthina ithihaasa bete ovu baaseg undu? kannada samskrutha da datthu puthre. thulu bokka tamil sudda dravida baaselu. thulu kritha threta dwapara kali yugotla ullekha undu. lipi daantina maratig maharastra undu, konkanig goa undu, thuluku lipi ijja? samskruti ijja? history ijja? janapada ijja? dada ijji? oit kammi undu. nammaklena achievemnt , pudar kannaderna, kannader paternaga muhammad jinna tojuje. avve tuluver paternda jinna na ajje la barpe avu daye? namak anyaya aatnd, tulunad rajya avode. tulunada da kaas gatta mitt daye povodu, tulunad da kas tulunag ge utilize avad tulunad singapore malpuga.

  6. Neetha ಹೇಳುತ್ತಾರೆ:

    Ok! While I dont support this demand for a separate state, do not forget that TULU apparently is a much older language than Kannada, and completely different language… It’s like saying Sanskrit is the mother of Dravidian Languages.

    1. neelanjana ಹೇಳುತ್ತಾರೆ:

      ತುಳುವಿನಲ್ಲಿ ಕನ್ನಡಕ್ಕಿಂತ ಹಿಂದಿನ ದಾಖಲೆಗಳಿವೆಯೇ?

  7. Santhosh Acharya ಹೇಳುತ್ತಾರೆ:

    ಕರ್ನಾಟಕ ಇತ್ತೆ ಉಪ್ಪುನಲ್ಕ ಇತ್ತ್ನಂಡ ಯಾವು.. ಪೊಸ ರಾಜ್ಯ ಬೊಡ್ಚಿ!

  8. Vivek Poojary ಹೇಳುತ್ತಾರೆ:

    ತುಳುವಪ್ಪೆ ಕನ್ನಡಾಂಭೆನ ಮಗಲ್ ಆವಡು, ತಂಗಡಿ ಆವಡು ಅತ್ತು.. ಪ್ರತ್ಯೇಕ ತುಳು ರಾಜ್ಯ ಆಂಡ ಎಡ್ಡೆ. ಇಜ್ಜಿಂದ ಕರ್ನಾಟಕಡು ತುಳು ಭಾಷೆನು ೨ನೆ ಅಧಿಕೃತ ಆಡಳಿತ ಭಾಷೆ ಮನ್ಪಡು…!!

  9. Suresh, Kuwait ಹೇಳುತ್ತಾರೆ:

    ವಿವೇಕ್ ಪೂಜಾರಿಯವರೇ ಹೆತ್ತಮ್ಮನನ್ನು ಕಡೆಗಣಿಸಲು ಆಕೆಯ ಹಾಲನ್ನೇ ಉಪಯೋಗಿಸಿದ್ದೀರ( ಕನ್ನಡ ಲಿಪಿ). ಸುಮ್ಮನೆ ವೇಳೆ ಹಾಳು ಮಾಡುವ ಬದಲು ಮುಹಮ್ಮದ್ ಅಲಿ ಜಿನ್ನಃ ವರಂತೆ ನೀವು ಏಕೆ ಪ್ರತ್ಯೇಕ ದೇಶವನ್ನೇ ಕೇಳಬಾರದು? ಏಕ್ ದಂ ಜಾಕ್ಪಾಟ್! ಇಲ್ಲವಾದರೆ ತಾಯಿಮಗಳ ಬಾಂಧವ್ಯವನ್ನು ಹಾಳುಮಾಡದೆ ತೆಪ್ಪಗಿರಿ…

  10. Vivek Poojary ಹೇಳುತ್ತಾರೆ:

    ಸುರೇಶ್ ಅವರೇ, ಬರೀ ಕುವೈತ್ ನಲ್ಲಿದ್ದುಕೊಂಡು ಇಂಟರ್ನೆಟ್ನಲ್ಲಿ ನೋಡುವ ಬದಲು ತುಳುನಾಡಿಗೆ ಬಂದು ತುಳು ಭಾಷೆಯ ಸ್ಥಿತಿ-ಗತಿಯನ್ನೊಮ್ಮೆ ನೋಡಿ.. ಇಂದು ತುಳು ಭಾಷೆಗೆ ದೊಡ್ಡ ಗಂಡಾಂತರ ಇರುವುದು ಇಂಗ್ಲಿಷ್ ಭಾಷೆಯಿಂದಲ್ಲ, ಬದಲಾಗಿ ಕನ್ನಡದಿಂದ..! ಇಲ್ಲಿ ತುಳು ಸಂಸ್ಕೃತಿಗೆ ಯಾವ ಅಪಾಯವೂ ಇಲ್ಲ. ಆದರೆ ತುಳು ಸಂಸ್ಕೃತಿಗೆ ಕನ್ನಡ ಕಾಲಿಟ್ಟು, ತುಳುವನ್ನು ದೂರ ಮಾಡುತ್ತಿದೆ. ಇದರಿಂದ ತುಳುನಾಡಿನಲ್ಲಿ ಭವಿಷ್ಯದಲ್ಲಿ ತುಳುವಿನ ಹಿಡಿತ ಹೋಗುವುದು..! ಹಾಗೆಯೇ ನೀವು ಕನ್ನಡಿಗರು ತುಳುವನ್ನು ಬಹಳ ತಾತ್ಸಾರವಾಗಿ ನೋಡುತ್ತೀರೋ ಹೊರತು ಅದರ ಉದ್ದಾರಕ್ಕೆ ಬೆಂಬಲ ಕೊಡುವುದಿಲ್ಲ. ಇದಕ್ಕೆ ಗುಲ್ಬರ್ಗದಲ್ಲಿ ಉರ್ದುವನ್ನು 2ನೇ ಆಡಳಿತ ಭಾಷೆ ಮಾಡುವಾಗ ವಿರೋಧಿಸಿದ್ದೇ ಸಾಕ್ಷಿ..! ಹಾಗೆಯೇ ತುಳುವಿಗೆ ಕನ್ನಡ ತಾಯಿ ಅಲ್ಲ. ತುಳು ಭಾಷೆ ಕನ್ನಡಕ್ಕಿಂತ ಹಳೆಯದು..! ಕನ್ನಡಕ್ಕಿಂತ ಶ್ರೇಷ್ಠ ಸಂಸ್ಕೃತಿ ತುಳುವಿನದ್ದು. ಇಂದು ಇದ್ದೆ ತುಳುನಾಡು ಕನ್ನಡಮಯವಾಗುತ್ತಿದೆ. ಇದನ್ನು ತಡೆಗಟ್ಟುವ ಅಗತ್ಯವಿದೆ..!

    1. ರಾಕೇಶ್ ಶೆಟ್ಟಿ ಹೇಳುತ್ತಾರೆ:

      ತುಳುತ ಸ್ಥಿಗು ತುಳುವೆರೆ ಕಾರಣ.ಪೊಕ್ಕಡೆ ದಾಯೆ ಕನ್ನಡಗು ನೆರ್ಪರ್ ಬೇಲೆ ಮನ್ಪೋಡಾತಿನ ಯಂಕುಲು ತುಳುವೇರ್. ಕುಡ ಒಂಜಿ ರಾಜ್ಯ ಮನ್ಪುನ ಪೂರ ಪ್ಪೊಕ್ಕಡೆ ಅವೆನ್ ಬುಡ್ದ್ ಎಂಚ ತುಳು ಭಾಷೆನ್ ದುಂಬ್ ಕನವೊಡು ಅಂದು ಯೋಚನೆ ಮನ್ಪುಗ

  11. shivu ಹೇಳುತ್ತಾರೆ:

    ತುಳು ಸಹೋದರರೆ ಏಕೆ ಈ ನಿಮ್ಮ ಪ್ರತ್ಯೇಕತೆ ವಾದ, ತುಳು ನಾಡಿಂದ ಸುಮಾರು 43% ಜನರು ಕರ್ನಾಟಕದಾದ್ಯಂತ ಬದುಕು ಕಟ್ಟಿಕೊಂಡಿದ್ದಾರೆ, ಈ ತರದ ಹೇಳಿಕೆಗಳಿಂದ ಮನಸ್ಸು ಪಲ್ಲಟವಾಗಿ ದ್ವೇಷಕ್ಕೆ ಎಡೆ ಮಾಡಿಕೊಡುತ್ತದೆ, ನಾವೆಲ್ಲರೂ ಸಹೋದರರು ಅದರಂತೆ ಹೋಗೋಣಾ. ತುಳು ಭಾಷೆಯ ಅಭಿವ್ರಿದ್ದಿಗೋಸ್ಕರ ಹಲವಾರು ಕನ್ನಡಿಗರು ಶ್ರಮಿಸ್ತ ಇದ್ದಾರೆ(ಚಲನಚಿತ್ರಗಳಲ್ಲಿ, ಕತೆ ಕಾದಂಬರಿಗಳಲ್ಲಿ) ಅದರಂತೆ ತುಳು ಭಾಂದವರು ಕೂಡ, ಅದ್ದರಿಂದ ದಯವಿಟ್ಟು ಸಾವಿರಾರು ವರ್ಷಗಳ ಭಾಂದವ್ಯ ವನ್ನ ಕ್ಷಣ ಕಾಲದಲ್ಲಿ ಹಾಲು ಮಾಡಬೇಡಿ. ೭೦೦ ವರ್ಷಗಳ ಇತಿಹಾಸ ತುಳು ಭಾಷೆಯದು ಇದು ಮಲೆಯಾಳಂ ಮತ್ತು ಕನ್ನಡ ಮಿಶ್ರಿತದಿಂದ ಹುಟ್ಟಿದ ಭಾಷೆ.

  12. raja shetty ಹೇಳುತ್ತಾರೆ:

    @shivu nimma jnayannwanna swalpa maruparseelishi, tulu ,taminaste puratana, malyalam vikaswadaddu 5 rinda 8 satamaanda olage,kannada 1 ne satmaandalli, aadare tulu baashe grreek natagalalli baruutade praachina tamil sangama sahitydalli tuluva raajara bagge olleka wide…………… nimmage anisida haage bareyabedi

    1. chandru ಹೇಳುತ್ತಾರೆ:

      ಕನ್ನಡ ಬಾಷೆಯು ದಕ್ಷಿಣ ಅಮೆರಿಕಾದ ಬಾಷೆಗಳಾದ ಗುರಾಣಿ, ಕ್ವೆಚ , ನಹುತಲ್ , ಮಾಯಾ ಬಾಷೆಗಳಲ್ಲಿ ಕಂಡು ಬರುತ್ತದೆ . ನೀವು ಹೇಳಿದ ಗ್ರೀಕ್ ನವರು ಉಲ್ಲೆಕಿಸಿದ ಬಾಶೆ ಕನ್ನಡವೇ ಹೊರತು ತುಳುವಲ್ಲ . ತುಳುವರ ಮೂಲ ಬಾಶೆ ಕನ್ನಡವೇ. ತುಳು ಬಾಶೆ ಹುಟ್ಟಿದ್ದು ಒಂದು ಆಡು ಬಾಷೆಯಾಗಿ ಮಲೆಯಾಳಿ ಹಾಗು ತಮಿಳರ ಜೊತೆ ವ್ಯವಹರಿಸುವುದಕ್ಕೆ ಹುಟ್ಟಿದ ಬಾಶೆ.

  13. K.R.SHETTY ಹೇಳುತ್ತಾರೆ:

    ತುಳುನಾಡು ನಿಮರ್ಾಣದ ಬಗ್ಗೆ ಎರಡು ಪತ್ರಗಳು ಪ್ರಕಟವಾಗಿದ್ದು ಅದು ಸ್ವಾರಸ್ಯಕರವಾಗಿತ್ತು. ಭಾಷೆಗೆ ಲಿಪಿ ಇಲ್ಲದ ಮೇಲೆ ಅಂತಹಾ ಭಾಷೆಯ ಆಧಾರದಲ್ಲಿ ಒಂದು ರಾಜ್ಯದ ಬೇಡಿಕೆ ಇಡುವುದು ಖಂಡಿತವಾಗಿಯೂ ಸರಿಯಲ್ಲ. ಹಾಗೊಂದು ವೇಳೆ ತುಳು ಭಾಷೆಯ ಹೆಸರಿನಲ್ಲಿ ರಾಜ್ಯವೊಂದರ ನಿಮರ್ಾಣವಾದರೆ ಆಡಳಿತಾತ್ಮಕವಾಗಿ ಸಮಸ್ಯೆಯಾಗುತ್ತದೆ. ತುಳು ಲಿಪಿಯನ್ನು ಬಳಕೆಗೆ ತರಲು ಕನಿಷ್ಠ ಮೂವತ್ತು ವರ್ಷಗಳಾದರೂ ಬೇಕಾದೀತು ಎಂದು ಒಬ್ಬರು ಬರೆದಿದ್ದರೆ. ಅದಕ್ಕೆ ಉತ್ತರವಾಗಿ ಉಡುಪಿಯ ಅನಿಲ್ ಎಂಬವರು ನಮ್ಮ ದೇಶದ ಭಾಷೆಯಾದ ಹಿಂದಿಗೆ ಲಿಪಿಯೇ ಇಲ್ಲ. ಅದನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ ಇಲ್ಲಿ ಭಾಷೆಯ ತೊಡಕು ಉಂಟಾಗಿದೆಯೇ? ಎಂದು ಕೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಚಿಂತನೆಯನ್ನು ಮಾಡಿದಾಗ ಗೋವಾ, ಮಹಾರಾಷ್ಟ್ರವೂ ಸೇರಿದಂತೆ ಉತ್ತರ ಭಾರತದ ಒಟ್ಟು ಹದಿನಾಲ್ಕು ರಾಜ್ಯಗಳಲ್ಲಿ ದೇವನಾಗರಿ ಲಿಪಿಯನ್ನೇ ಬಳಸಲಾಗುತ್ತದೆ. ಇದು ಭಾಷಾವಾರು ಪ್ರಾಂತ್ಯ ರಚನೆ ಎಂಬ ಪ್ರಕ್ರಿಯೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಭಾಷಾವಾರು ಅಂದರೆ ಕೇವಲ ಕನ್ನಡ, ತೆಲುಗು, ತಮಿಳು, ಮಲೆಯಾಳಿಗಾಗಿ ಮಾತ್ರ ಮಾಡಲಾಗಿದೆಯೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಆದರೆ ಇಲ್ಲೆಲ್ಲಾ ಒಂದು ರಾಜ್ಯವನ್ನು ನಿಮರ್ಿಸುವುದರಲ್ಲಿ ಭಾಷೆಯ ತೊಡಕು ಎಂದಿಗೂ ಉಂಟಾಗುವುದಿಲ್ಲ ಎಂಬುದನ್ನು ನೋಡಬಹುದಾಗಿದೆ. ಆಯಾ ಭಾಗದ ಸಾಂಸ್ಕೃತಿಕ ಉಳಿವಿಗೆ ಭಾಷೆಯು ಕಾರಣವಾಗುವುದರಿಂದ ಭಾಷಾವಾರು ಪ್ರಾಂತ್ಯ ರಚಿಸಿದ್ದಾರೆ ಎಂದು ತಿಳಿದುಕೊಂಡರೆ ಪಂಚ ದ್ರಾವಿಡ ಭಾಷೆಯಾದ ತುಳುವಿಗೆ ಒಂದು ಬಲು ದೊಡ್ಡ ಅನ್ಯಾಯವಾಗಿ ರುವುದಂತೂ ಪರಮ ಸತ್ಯವಾಗಿದೆ. ಇದಕ್ಕೆ ಅನಿಲ್ ರವರು ಹೇಳಿದಂತೆ ತುಳುನಾಡಿನ ತುಳು ಮಾತೃಭಾಷೆಯಲ್ಲದ ಅಂದಿನ ಸಾಹಿತಿಗಳು ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ.
    ಈ ಭಾಷೆಯ ಅಧ್ಯಯನ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದಾಗ ಭಾರತದ ಸಂಪರ್ಕ ಭಾಷೆ ಎಂದು ಪರಿಗಣಿಸಲಾದ. ಪ್ರಪಂಚದಲ್ಲಿ ಹೆಚ್ಚಾಗಿ ಮಾತನಾಡುವ ಇಂಗ್ಲಿಷ್ಗೆ ಲಿಪಿ ಇಲ್ಲದೇ ಇರುವುದು ಕಂಡು ಬರುತ್ತದೆ. ಈಗ ಬಳಕೆಯಲ್ಲಿರುವ ಇಂಗ್ಲಿಷ್ನ್ನು ಲ್ಯಾಟಿನ್ ಲಿಪಿಯಲ್ಲಿ ಬರೆಯಲಾಗುತ್ತದೆ! ಮಾತ್ರವಲ್ಲದೆ ಇದಕ್ಕೆ ಸ್ಪಷ್ಟವಾದ ಉಚ್ಚಾರವೇ ಇಲ್ಲದೆ ಇದೊಂದು ಅಪೂರ್ಣ ಭಾಷೆಯಾಗಿ ಪರಿಗಣಿಸಲ್ಪಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ಮಂಗಳೂರನ್ನು `ಮಂಗಳೂರು’ ಎಂದು ಕರೆಯಬೇಕು, ಬರೆಯಬೇಕು ಎಂದು ಆದೇಶಿಸಲಾಗಿದೆ. ಆದರೆ ಮಂಗಳೂರು ಎಂದು ಬರೆಯುವುದು ಹೇಗೆ? ಒಂಓಉಂಐಗಖಇ ಎಂದೇ ಅಥವಾ ಒಂಓಉಂಐಔಔಖಗಎಂದೇ ಅಥವಾ ಒಂಓಉಂಐಔಔಖ ಎಂದೇ ಎಂದು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಇಂಗ್ಲಿಷ್ ಬರವಣಿಗೆಯಲ್ಲಿ ಹೆಚ್ಚಿನ ಎಲ್ಲಾ ಪದಗಳಲ್ಲಿ ಈ ರೀತಿಯ ಅನಿಶ್ಚಿತತೆ ಕಾಡುತ್ತದೆ. ರಾಮ ಎಂದು ಬರೆಯುವುದು ಹೇಗೆ? ರಮಾ ಎಂದು ಬರೆಯುವುದು ಹೇಗೆ? ಜಾಗತಿಕವಾಗಿ ನೋಡಿದರೆ ಭಾರತದ ಇಂಗ್ಲಿಷ್ ಮತ್ತು ವಿದೇಶಗಳ ಇಂಗ್ಲಿಷ್ಗೆ ಬಹಳಷ್ಟು ವ್ಯತ್ಯಾಸಗಳಿವೆ. ಅಂತಜರ್ಾಲದ ವಿಕಿಪೀಡಿಯಾದಲ್ಲಿ ಈ ರೀತಿ ಆಭಾಸ ಎದ್ದು ಕಾಣುತ್ತಿದೆ. ನಮಗೆ ಬೇಕಾದ ಮಾಹಿತಿಯನ್ನು ಹುಡುಕಾಡಲು ಕೆಲವೊಂದು ಬಾರಿ ಸ್ಪೆಲ್ಲಿಂಗ್ನಲ್ಲಿ ಬಹಳಷ್ಟು ಸರ್ಕಸ್ ಮಾಡಬೇಕಾಗುತ್ತದೆ. `ಙ, ಞ’ ಎಂಬ ಪದವನ್ನು ಇಂಗ್ಲಿಷ್ನಲ್ಲಿ ಬರೆಯಲಾಗುತ್ತದೆಯೇ?
    ಹಾಗಿರುವಾಗ ಭಾಷೆ ಒಂದು ನಾಡನ್ನು ನಡೆಸುವಲ್ಲಿ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ. ತುಳುನಾಡಿನ ವಿಚಾರದಲ್ಲಿ ಇರುವುದು ಕೇವಲ ಭಾಷೆಯ ವಿಚಾರವಲ್ಲ. ಅದರಲ್ಲಿ ಸಂಸ್ಕೃತಿಯ ವಿಚಾರವೂ ಸೇರಿಕೊಂಡಿದೆ. ಉದಾಹರಣೆ ಕೊಡುವುದಾದರೆ ಕಂಬಳ ಎನ್ನುವುದು (ಹಿಂಸೆ ಎನ್ನುವುದು ಎರಡನೇ ವಿಚಾರ) ಇಲ್ಲಿ `ತುಳುನಾಡಿನ’ ಸಂಸ್ಕೃತಿ ಆದರೆ ಇದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ `ಕನರ್ಾಟಕ’ ವಿಫಲವಾಗಿದೆ. ಅದನ್ನು ಅರ್ಥಮಾಡಿಕೊಡುವುದಕ್ಕೆ ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಇಲ್ಲಿನ ದೈವ, ಭೂತ, ಪ್ರೇತ ಇತ್ಯಾದಿ ಆರಾಧನೆಗಳನ್ನು `ಕನರ್ಾಟಕ’ ಅರ್ಥ ಮಾಡಿಕೊಂಡಿಲ್ಲ. ಇಲ್ಲಿನ ಕೋರ್ದಬ್ಬುವನ್ನು ಹೀನಾಯಾಮಾನವಾಗಿ ಒಂದು ಕನ್ನಡ ಟಿವಿ ಚಾನೆಲ್ ಚಿತ್ರಿಸಿದ್ದು ಎಲ್ಲರಿಗೂ ಗೊತ್ತಿದೆ. ಆನಂತರ ಆ `ಕನ್ನಡ’ ಚಾನೆಲ್ಗೆ ಅರ್ಥಮಾಡಿಸಿ ಕ್ಷಮೆ ಕೇಳಿಸಬೇಕಾಯಿತು! `ಕನರ್ಾಟಕ’ದ ದಸರಾ ಆಚರಣೆಯಲ್ಲಿ ಆನೆ, ಕುದುರೆಗಳನ್ನು ಬಳಸಿದರೆ ಅದು ಪ್ರಾಣಿ ಹಿಂಸೆ, ಪ್ರಾಣಿಗಳ ಪ್ರದರ್ಶನ ಆಗುವುದಿಲ್ಲ! ಅವುಗಳನ್ನು ಚಾಟಿ, ಅಂಕುಶ, ಸಂಕೋಲೆಗಳಿಂದ ಬಿಗಿದು ಖೆಡ್ಡಾಕ್ಕೆ ಬೀಳಿಸುವುದು `ಕನರ್ಾಟಕ’ದಲ್ಲಿ ಪ್ರಾಣಿ ಹಿಂಸೆ ಆಗುವುದಿಲ್ಲ. ಆದರೆ ತುಳುನಾಡಿನ ಕಂಬಳ ಪ್ರಾಣಿ ಹಿಂಸೆ! ಸ್ವಾಭಾವಿಕವಾಗಿ ಕೃಷಿಯಲ್ಲಿ ಉಪಯೋಗಿಸುವ ಕೋಣಗಳನ್ನು ಬಾರುಕೋಲಿನಿಂದಲೇ ಪಳಗಿಸುವುದು ರೂಢಿ. ಆದರೆ `ತುಳುನಾಡಿ’ನ ಕಂಬಳದಲ್ಲಿ ಬಳಸುವ ಕೋಣಗಳನ್ನು ನಿಯಂತ್ರಿಸಲು ಬಾರುಕೋಲು ಬಳಸುವುದು `ಕನರ್ಾಟಕ’ಕ್ಕೆ ಅರ್ಥವಾಗುವುದಿಲ್ಲ! ತುಳುನಾಡು ಕನರ್ಾಟಕಕ್ಕಿಂತ ಹೇಗೆ ಪ್ರತ್ಯೇಕವಾಗಿದೆ ಎಂಬುದಕ್ಕೆ ಮೇಲ್ನೋಟದ ಉದಾಹರಣೆಗಳು ಇವು.
    ಇತ್ತೀಚೆಗೆ ತುಳುವಿನಲ್ಲಿ ಬರೆಯಲಾದ (ಲಿಪಿ ಕನ್ನಡ) ಒಂದು ಮದುವೆಯ ಕಾಗದ ಓದಿದೆ. ಅದರಲ್ಲಿ ಒಂದು ಬದಿಯಲ್ಲಿ ತುಳುವಿನಲ್ಲಿ, ಇನ್ನೊಂದು ಬದಿಯಲ್ಲಿ ಇಂಗ್ಲಿಷ್ನಲ್ಲಿ ಆಮಂತ್ರಣ ನೀಡಲಾಗಿತ್ತು. ತುಳುವಿನಲ್ಲಿ `ಜಾದರ್ೆದ ಪದ್ರಾಡ್ ಪೋಪಿನಾನಿ’ ಎಂದು ಮದುವೆಯಾಗುವ ದಿನವನ್ನು ಹೇಳಲಾಗಿತ್ತು. ಜಯಕಿರಣ ನಿಮ್ಮಿಂದ ವಿಭಾಗದಲ್ಲಿ ಓರ್ವರು ಬರೆದ ಸೋಮವಾರದಿಂದ ಆದಿತ್ಯವಾರದವರೆಗಿನ ದಿನಗಳು ತುಳು ದಿನಗಳ ಹೆಸರುಗಳಲ್ಲ ಎಂಬುದನ್ನು ನೆನಪಿಸಿತ್ತು! ಇಂದಿನ ಯುವಕರು ತುಳುವಿನ ಬಗ್ಗೆ ಅದೆಷ್ಟು ಅಭಿಮಾನವನ್ನು ಹೊಂದಿದ್ದಾರೆ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಈ ಅಭಿಮಾನವನ್ನು ಬೆಳೆಸುವುದಕ್ಕೆ `ತುಳುನಾಡು’ ಸಹಕಾರಿಯಾಗುತ್ತದೆ. ಯುವ ಜನಾಂಗ ಮುಂದಿನ ದಿನಗಳಲ್ಲಿ ಮದುವೆಯ ಆಹ್ವಾನ ಪತ್ರಿಕೆಯನ್ನು ಮೂರು ಭಾಗಗಳನ್ನಾಗಿ ಮಾಡಿ ಒಂದರಲ್ಲಿ `ತುಳುಲಿಪಿ’ ಇನ್ನೊಂದರಲ್ಲಿ ಅರ್ಥವಾಗುವ ಹಾಗೆ ಕನ್ನಡ ಲಿಪಿಯಲ್ಲಿ ತುಳು, ಇನ್ನೊಂದು ಭಾಗದಲ್ಲಿ ಇಂಗ್ಲಿಷ್ನಲ್ಲಿ ಆಹ್ವಾನ ಪತ್ರಿಕೆಯನ್ನು ಮುದ್ರಿಸುವ ಕಾಲ ಖಂಡಿತಾ ಬರಲಿದೆ. ತುಳು ಲಿಪಿಗೆ ರಾಜಾಶ್ರಯ ಸಿಕ್ಕಿದರೆ ಮೂವತ್ತು ವರ್ಷದ ಅಗತ್ಯವಿಲ್ಲ ಹತ್ತೇ ವರ್ಷದಲ್ಲಿ ಜನರು ತುಳು ಲಿಪಿಯನ್ನು ಕಲಿತು ಬಿಡುತ್ತಾರೆ. ತುಳುನಾಡಿನ ಶಾಲೆಗಳಲ್ಲಿ ತುಳು ಲಿಪಿ ಖಡ್ಡಾಯವಾಗಿ ಕಲಿಯಬೇಕು ಎಂಬ ನಿಯಮವನ್ನು ಜಾರಿಗೆ ತರಲು `ಕನರ್ಾಟಕ’ದಿಂದ ಸಾಧ್ಯವೇ?
    ಪ್ರಾದೇಶಿಕ ಸಂಸ್ಕೃತಿ, ಭಾಷೆ, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕೆಂಬ ದೃಷ್ಟಿಯಿಂದ ಸ್ವಾತಂತ್ರ್ಯದ ನಂತರ ರಾಜ್ಯಗಳ ರಚನೆಯಲ್ಲಿ ಭಾಷೆಗಳಿಗೆ ಪ್ರಾತಿನಿಧ್ಯ ಕೊಡಲಾಗಿತ್ತು. ಇದು ಸಂವಿಧಾನ ಬದ್ಧವಾಗಿತ್ತು. ಆದರೆ ಸಮೃದ್ಧವಾದ ಹಿಂದಿ, ಇಂಗ್ಲಿಷ್ನ್ನು ಮೀರುವ ಯೋಗ್ಯತೆ ಇರುವ ಪುರಾತನ ತುಳುಲಿಪಿಗೆ ಅನ್ಯಾಯ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಸಂವಿಧಾನಾತ್ಮಕವಾದ ಕಾನೂನು ಹೋರಾಟದಲ್ಲಿ `ತುಳುನಾಡು’ ಬೇಡಿಕೆಗೆ ಖಂಡಿತವಾಗಿಯೂ ಅಧಿಕೃತ ಮುದ್ರೆ ಬೀಳುತ್ತದೆ. ಅಂದು ಹಳಿತಪ್ಪಿದ ತುಳು ಭಾಷೆ ಎಂಬ ಉಗಿಬಂಡಿಯನ್ನು ಮತ್ತೆ ಹಳಿಗೇರಿಸುವ ಪ್ರಯತ್ನವಾಗಬೇಕು. ತುಳುನಾಡಿನ ಪ್ರತಿಯೋರ್ವ ಯುವಕನೂ ಈ ನಿಟ್ಟಿನಲ್ಲಿ ತಮ್ಮ ಜೀವಮಾನದಲ್ಲಿ ಏನಾದರೂ ಒಂದು ಅಂದರೆ ಕನಿಷ್ಠ ಮದುವೆ ಇನ್ನಿತರ ಆಹ್ವಾನ ಪತ್ರಿಕೆಯಲ್ಲಿ ಒಂದೆರಡಾದರೂ ತುಳು ಲಿಪಿ ಇರುವಂತೆ, ತಮ್ಮ ತಮ್ಮ ಊರಿನ ಹೆಸರು ಅಂಗಡಿ, ಹೊಟೇಲು, ಉದ್ಯಮಗಳ ಹೆಸರನ್ನು ತುಳು ಲಿಪಿಯಲ್ಲಿ ಬರೆಯುವ ಕೊಡುಗೆಯನ್ನು ನೀಡಬೇಕಾಗಿದೆ ಇದು ತುಳುನಾಡು ನಿಮರ್ಾಣದ ಕಾರ್ಯಕ್ಕೆ ಮರಳು ಹೊರುವ ಅಳಿಲ ಸೇವೆಯಾಗುತ್ತದೆ.

  14. Vinod ಹೇಳುತ್ತಾರೆ:

    ಈ ತುಳುನಾಡು ರಾಜ್ಯದಿಂದ ಕೆಲ ರಾಜಕಾರಣಿಗಳಿಗೆ ಲಾಭವಾಗಬಹುದೇ ಹೊರತು ತುಳು ಭಾಷೆಗೆ ಏನಾದರು ಸಹಾಯವಾಗುವುದು ಅಷ್ಟರಲ್ಲೇ ಇದೆ. ಸದ್ಯಕ್ಕಂತೂ ತುಳು ನಾಡಿಗರು ತುಳುನಾದಲ್ಲೇ ಅಲ್ಲದೆ ದೇಶ ವಿದೇಶ ಗಳಲ್ಲಿ ಬಹಳ ಗೌರವದಿಂದ ಬಾಳುತ್ತಾ ಇದ್ದಾರೆ. ತುಳು ಸಂಸ್ಕ್ರುತಿಯನ್ನು ಉಳಿಸುವುದು ನಮ್ಮ ಕೈಯಲ್ಲೇ ಇದೆ. ಇದಕ್ಕಾಗಿ ಹೊಸ ರಾಜ್ಯ ಅವಶ್ಯಕತೆಯಿಲ್ಲ. ಹಾಗೆ ನೋಡಿದರೆ ಕರ್ನಾಟಕದಲ್ಲಿ ನಮ್ಮ ಪರಿಸ್ಥಿತಿ ಬೇರೆಯವರಿಗೆ ಹೋಲಿಸಿದರೆ ಪರವಾಗಿಲ್ಲ ಅನ್ನಬಹುದು. ಕನ್ನಡ ತಾಯಿಯ ಮಡಿಲಲ್ಲಿ ಹಾಯಾಗಿರೋಣ.

Leave a reply to Vivek Poojary ಪ್ರತ್ಯುತ್ತರವನ್ನು ರದ್ದುಮಾಡಿ